ವಿಶ್ವದ 173 ನಗರಗಳ ಜೀವನಯೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಪ್ರಮುಖ ಐದು ನಗರಗಳು 140ರಿಂದ 146ನೇ ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಅತಿ ಕಳಪೆ ಸ್ಥಾನ ಬೆಂಗಳೂರು (BANGLORE)ನದ್ದಾಗಿದೆ.
ಬೆಂಗಳೂರು 146ನೇ ಸ್ಥಾನ ಪಡೆದಿದೆ. ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ (THE ECONOMIST INTELLIGENCE UNITS) ನ ಜಾಗತಿಕ ಜೀವನಯೋಗ್ಯ ಸೂಚ್ಯಂಕ 2022ರ ವರದಿ ಪ್ರಕಟಿಸಿದ್ದು, ಕಳೆದ ವರ್ಷ ನಡೆದ ಅಧ್ಯಯನದಲ್ಲಿ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿತ್ತು. ಆದರೆ ಈ ವರ್ಷ ಬೆಂಗಳೂರು 54.4 ಅಂಕಗಳೊಂದಿಗೆ 146ನೇ ಸ್ಥಾನ ಪಡೆದು ಜೀವನಯೋಗ್ಯ, ಮೂಲಸೌಕರ್ಯ ಸೂಚ್ಯಂಕದಲ್ಲಿ ಕಳಪೆ ಸ್ಥಾನ ಪಡೆದಿದೆ.
ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಿಸರ, ಮೂಲಭೂತ ಸೌಕರ್ಯ ಈ ಐದು ಮಾನದಂಡಗಳ ಮೇಲೆ ಸ್ಥಾನ ನೀಡಲಾಗುತ್ತದೆ. ಮೂಲಭೂತ ಸೌಕರ್ಯ ವಿಚಾರದಲ್ಲಿ ಬೆಂಗಳೂರು (BANGLORE) ನಗರ ಭಾರತದ ಇತರೆ ನಗರಗಳಾದ ದೆಹಲಿ (DELHI), ಮುಂಬೈ(MUBAI), ಅಹಮದಾಬಾದ್ (AHAMADBAD) ಹಾಗೂ ಚೆನ್ನೈ(CHENNAI)ಗಿಂತಲೂ ತೀರಾ ಹಿಂದುಳಿದಿದೆ. ಇದನ್ನೂ ಓದಿ : – PSI ಅಕ್ರಮ ನೇಮಕಾತಿ ಪ್ರಕರಣ – ಎಡಿಜಿಪಿ ಅಮೃತ್ ಪಾಲ್ ಬಂಧನ
ಮೂಲಭೂತ ಸೌಕರ್ಯ: ರಸ್ತೆ ಗುಣಮಟ್ಟ, ಸಾರ್ವಜನಿಕ ಸಾರಿಗೆ, ಆಂತರಿಕ ಸಂಪರ್ಕ, ಇಂಧನ, ಟೆಲಿಕಮ್ಯುನಿಕೇಷನ್, ಕುಡಿಯುವ ನೀರು, ವಸತಿ ಗುಣಮಟ್ಟ ಇದರ ಮಾನದಂಡ.
ಬೆಂಗಳೂರು ಭಾರತದ ಇತರೆ ನಗರಗಳಷ್ಟೇ ಗುಣಮಟ್ಟ ಹೊಂದಿದ್ದರೂ ಮೂಲಭೂತ ಸೌಕರ್ಯ ವಿಚಾರದಲ್ಲಿ ತೀರಾ ಹಿಂದುಳಿದಿದೆ.
ಮೂಲಸೌಕರ್ಯ ಅಂಕಗಳ ಪೈಕಿ ಪಾಕಿಸ್ತಾನದ ಕರಾಚಿ ನಗರ ಬೆಂಗಳೂರಿಗಿಂತ ಉತ್ತಮ ಸಾಧನೆ ಮಾಡಿದ್ದು, 51.8 ಅಂಕ ಪಡೆದಿದೆ. ನೈಜೀರಿಯಾದ ಲಾಗೊಸ್ ನಗರ ಬೆಂಗಳೂರಿನಷ್ಟೇ 46.4 ಅಂಕ ಪಡೆದಿದೆ
ದೆಹಲಿ 56.5 ಅಂಕ ಪಡೆದು 140ನೇ ಸ್ಥಾನಗಳಿಸಿದ್ರೆ, ಮುಂಬೈ 56.2 ಅಂಕ ಪಡೆದು 141ನೇ ಸ್ಥಾನ
ಚೆನ್ನೈ 55.8 ಅಂಕಗಳೊಂದಿಗೆ 142ನೇ ಸ್ಥಾನ, ಅಹ್ಮದಾಬಾದ್ 55.7 ಅಂಕಗಳೊಂದಿಗೆ 143ನೇ ಸ್ಥಾನ
ಬೆಂಗಳೂರು 54.4 ಅಂಕಗಳೊಂದಿಗೆ 146ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ : – ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ- ಅದಕ್ಕೆ ಹೇಳಿದೆಲ್ಲ ಉಲ್ಟಾ ಆಗ್ತಿದೆ – ಸಿ.ಟಿ ರವಿ